Normal Theme Yellow on Black Theme Fusia on Black Theme

ENGLISH
Sun

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ, ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಹ್ಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಪರಮೇಶ್ವರನನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕದ ಸಹ್ಯಾದ್ರಿ ಪರ್ವತದ ಬಳಿ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘೃಪಾದ ಮಹರ್ಷಿಗಳು ಸಹ್ಯಾದ್ರಿ ಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಸೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ,ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮೆರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ಮಂದರತಿಯೆಂಬ ನಾಗ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರ್ತಿ ) ಹೆಸರಾಯಿತು.

ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೇಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನು ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ, ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.

ವ್ಯಾಘ್ರಪಾದ ಮುನಿ ಮತ್ತು ತಾಮಸ ಗುಣದ ಕಿರಾತ ತರುಣಿ ಮಾಲಿನಿಯೊಂದಿಗಿನ ಸಂಪರ್ಕದ, ಅಕಾಲಿಕ ಗರ್ಬೋತ್ಪತ್ತಿಯಿಂದ ಜನಿಸಿದ ಮಹಿಷನು, ದೇವವರ್ಮ ಮಹಾರಾಜನ ಪತ್ನಿ ಜಲಜಾಕ್ಷಿಯನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಮನಸೋತು, ತನ್ನ ಮನೋಭಿಲಾಶೆಯನ್ನು ತಿರಸ್ಕರಿಸಿದ ಆಕೆಯನ್ನು ಬಲಾತ್ಕರಿಸಲು ಮುಂದಾದಾಗ ರಕ್ಕಸನಿಂದ ತಪ್ಪಿಸಿಕೊಂಡು ಅರಮನೆ ಸೇರುತ್ತಾಳೆ. ನಂತರ ಆ ರಾಜ ದಂಪತಿಗಳು ಮಂದಾರ್ತಿ ಕಾನನದಲ್ಲಿ ನೆಲೆಸಿದ್ದ ಸುದೇವ ಮುನಿಯ ಆಶ್ರಯದಲ್ಲಿದ್ದಾಗ, ಮಹಿಷನ ಅಣತಿಯಂತೆ, ಮಹೋಧರ ರಕ್ಕಸನು ಮುನಿಯ ಮೇಲೆ ಶರಪ್ರಯೋಗಿಸತೊಡಗುತ್ತಾನೆ. ಆಗ ಮುನಿಯ ದೇವಿಯನ್ನು ಸ್ತುತಿಸಿದಾಗ ರಕ್ಕಸನೆದುರು ಬೃಹದಾಕಾರದ ಹುತ್ತುವೊಂದು ಎದ್ದು ನಿಲ್ಲುತ್ತದೆ. ರಕ್ಕಸನ ಎಲ್ಲ ಅಸ್ತ್ರಗಳು ಹುತ್ತದಲ್ಲಿ ಮಾಯವಾಗುತ್ತವೆ. ರಾಜದಂಪತಿಗಳ ಪ್ರಾರ್ಥನೆಯಂತೆ ದೇವಿಯು ವೀರಭದ್ರ, ಹಾಯ್ಗುಳಿ, ಕಲ್ಲುಟಿಗ ಮತ್ತು ಬೊಬ್ಬಾರ್ಯರ ಸಹಾಯದಿಂದ ಎಲ್ಲ ರಕ್ಕಸರ ಸಂಹಾರ ಮಾಡಿದಳು.
ಮಾಲೀಕತ್ವ : ಈ ವೈಬ್ ಸೈಟ್ ಮತ್ತು ಅದರ ಪರಿವಿಡಿಯ ಮಾಲೀಕತ್ವವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಹೊಂದಿರುತ್ತಾರೆ.
Copyright © 2013 - All Rights Reserved - Shree Durgaparmeshwari Temple, Mandarthi
Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial